ಭದ್ರಾ 2

ಚಂದ್ರನ ಮಗಳು, ಉಚಥ್ಯ ಋಷಿಯ ಹೆಂಡತಿ. ಒಮ್ಮೆ ಈಕೆಯನ್ನು ವರುಣ ಅಪಹರಿಸಿದ. ಇದರಿಂದ ಕೋಪಗೊಂಡ ಉಚಥ್ಯ ಸಮುದ್ರವನ್ನು ಶೋಷಿಸುವ ಮೂಲಕ ಈಕೆಯನ್ನು ಮರಳಿ ಪಡೆದ.

2. ಪುರುರಾಜನಮಗಳು, ವಸುದೇವನ ಹದಿನಾಲ್ಕು ಮಂದಿ ಪತ್ನಿಯರ ಪೈಕಿ ನಾಲ್ಕನೆಯವಳು. ರೋಹಿಣಿ, ಇಂದಿರಾ, ವೈಶಾಖಿ, ಸುನಾಮ್ನಿ ಎಂಬ ನಾಲ್ವರು ಈಕೆಯ ಸಹೋದರಿಯರು.

3. ಶ್ರೀಕೃಷ್ಣನ ಅಷ್ಟಮಹಿಷಿಯರ ಪೈಕಿ ಒಬ್ಬಳು. ದೃಷ್ಟಕೇತುವಿನ ಹಾಗೂ ಕೃಷ್ಣನ ಸೋದರತ್ತೆ ಶ್ರುತಕೀರ್ತಿಯ ಮಗಳು. ಈಕೆಗೆ ಸಂಗ್ರಾಮಜಿತ್, ಬೃಹತ್ಸೇನ, ಶೂರ, ಪ್ರಹರಣ, ಅರಿಜಿತ್, ಜಯಾ, ಸುಭದ್ರ, ವಾಮ, ಆಯು, ಸತ್ಯಕ ಎಂಬ ಹತ್ತು ಮಂದಿ ಸೋದರರು. ಸ್ವಯಂವರ ಕಾಲದಲ್ಲಿ ಈಕೆಯ ಸೋದರರೇ ಕೃಷ್ಣನ ವಿರೋಧಿಗಳಾಗಿದರು. ಆದ್ದರಿಂದ ಕೃಷ್ಣ ಬಲಾತ್ಕಾರದಿಂದ ಈಕೆಯನ್ನು ದ್ವಾರಕೆಗೆ ಸಾಗಿಸಿಕೊಂಡು ಹೋದ.
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ